ನಾಗಮಂಗಲ ಕೋಮುಗಲಭೆ ಪ್ರಕರಣ: 55 ಬಂಧಿತರಿಗೆ ಜಾಮೀನು ಮಂಜೂರು

ನಾಗಮಂಗಲ ಕೋಮುಗಲಭೆ ಪ್ರಕರಣ: 55 ಬಂಧಿತರಿಗೆ ಜಾಮೀನು ಮಂಜೂರು

2024-09-27 10:19:30

ಮಂಡ್ಯ, ಸೆ. 27: ಜಿಲ್ಲೆಯ ನಾಗಮಂಗಲದಲ್ಲಿ  ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಡೆದಿದ್ದ ಕೋಮುಗಲಭೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ 55 ಆರೋಪಿಗಳಿಗೆ ಮಂಡ್ಯ 1ನೇ ಜಿಲ್ಲಾ ಮತ್ತು  ಸೆಷನ್ಸ್​ ಕೋರ್ಟ್​ನಿಂದ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಲಾಗಿದೆ. 

ನಾಳೆ, ನಾಡಿದ್ದು ರಜೆ ಹಿನ್ನೆಲೆ ಸೋಮವಾರ ಬಿಡುಗಡೆ ಮಾಡಲಿದ್ದಾರೆ. ಸೆಪ್ಟೆಂಬರ್ 11ರಂದು ಆರೋಪಿಗಳನ್ನು ಬಂಧಿಸಲಾಗಿತ್ತು.

ಗಣೇಶನ ಮೂರ್ತಿ ವಿಸರ್ಜನೆ ವೇಳೆ ಕೋಮುಗಲಭೆ ಆರಂಭಗೊಂಡು ಜಿಲ್ಲೆಯ ನಾಗಮಂಗಲ ಹೊತ್ತಿ ಉರಿದಿತ್ತು. ಕಿಡಿಗೇಡಿಗಳು ಕಂಡಕಂಡಲ್ಲಿ ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಹಚ್ಚಿದ್ದರು. ಇಡೀ ಪ್ರಕರಣದ ಕೇಂದ್ರಬಿಂದು ಬದ್ರಿಕೊಪ್ಪಲು ಗ್ರಾಮ ಅಕ್ಷರಸಹಃ ಸ್ಮಶಾನ ಮೌನವಾಗಿತ್ತು. ಬಂಧನ ಭೀತಿಯಲ್ಲಿ ಹಲವು ಯುವಕರು ಗ್ರಾಮವನ್ನ ತೊರೆದಿದ್ದರು.

ಘಟನೆ ನಡೆದ 15 ದಿನಗಳು ಕಳೆಯುತ್ತಾ ಬಂದರೂ ಗ್ರಾಮದತ್ತ ಮುಖ ಮಾಡಿಲ್ಲ. ಅದರಲ್ಲೂ ಬಂಧನದ ಭೀತಿ ಅಲ್ಲಿದ್ದ ಕಿರಣ್ ಎಂಬಾತ ಬ್ರೈನ್ ಸ್ಟೋಕ್​ನಿಂದಾಗಿ ಇತ್ತೀಚೆಗೆ ಸಾವನ್ನಪ್ಪಿದ್ದ. ಈ ನಿಟ್ಟಿನಲ್ಲಿ ಇಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಬದ್ರಿಕೊಪ್ಪಲು ಗ್ರಾಮಕ್ಕೆ ಭೇಟಿ ನೀಡಿ ಕಿರಣ್ ಕುಟುಂಬಕ್ಕೆ ಸಾಂತ್ವನ ಹೇಳಿ, ಆರ್ಥಿಕ ಸಹಾಯ ಮಾಡಿದ್ದಾರೆ.

ಘಟನೆಯಲ್ಲಿ ನಾಗಮಂಗಲ‌ ಪಟ್ಟಣದಾದ್ಯಂತ 26 ಅಂಗಡಿಗಳಿಗೆ ಕಿಡಿಗೇಡಿಗಳಿಂದ ಬೆಂಕಿ ಹಚ್ಚಲಾಗಿತ್ತು. ಅದರಲ್ಲಿ 1 ಕೋಟಿ 47 ಲಕ್ಷ‌ ರೂ. ಮೌಲ್ಯದ ಕಟ್ಟಡವಾಗಿದ್ದರೆ, 1 ಕೋಟಿ 18 ಲಕ್ಷ ರೂ. ಮೌಲ್ಯದ ಸರಕು ಬೆಂಕಿಗೆ ಆಹುತಿಯಾಗಿದ್ದವು. ಇನ್ನು ವರದಿ ತಯಾರು ಮಾಡಲು ಎಸಿ ನೇತೃತ್ವದಲ್ಲಿ 7 ಅಧಿಕಾರಿಗಳ ತಂಡ ರಚನೆ ಮಾಡಲಾಗಿತ್ತು. ಈ‌ ನಡುವೆ ಎಫ್​ಐಆರ್​ನಲ್ಲಿ 4.5 ಕೋಟಿ ರೂ. ನಷ್ಟದ ಬಗ್ಗೆ ಉಲ್ಲೇಖ ಮಾಡಿರುವುದು ಕಂಡು ಬಂದಿತ್ತು.

ಸದ್ಯ ನಾಗಮಂಗಲ ಪಟ್ಟಣ ಇದೀಗ ಸಹಜಸ್ಥಿತಿಗೆ ಮರಳಿದೆ. ಎಂದಿನಂತೆ ವ್ಯಾಪಾರ, ವಹಿವಾಟು ನಡೆಯುತ್ತಿವೆ. ಆದರೆ ಗಲಾಟೆಯಲ್ಲಿ ಕೆಲವು ಅಮಾಯಕರ ಬಂಧನವಾಗಿದ್ದು, ಸದ್ಯ ಅವರಿಗೂ ಬಿಡುಗಡೆ ಭಾಗ್ಯ ಸಿಕ್ಕಿದೆ.

author single

L Ramprasad

Managing Director

comments

No Reviews