ನಾಳೆ ಭಾನುವಾರ ಮಧ್ಯಾಹ್ನ ಭಾರತ vs ಗ್ರೇಟ್ ಬ್ರಿಟನ್ ಹಾಕಿ ಕ್ವಾರ್ಟರ್ ಫೈನಲ್

ನಾಳೆ ಭಾನುವಾರ ಮಧ್ಯಾಹ್ನ ಭಾರತ vs ಗ್ರೇಟ್ ಬ್ರಿಟನ್ ಹಾಕಿ ಕ್ವಾರ್ಟರ್ ಫೈನಲ್

2024-08-03 08:31:39

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಹಾಕಿ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯಗಳು ನಾಳೆ ಆಗಸ್ಟ್ 4 ಭಾನುವಾರದಿಂದ ನಡೆಯಲಿವೆ.

ಬಿ ಗುಂಪಿನಲ್ಲಿ ಭಾರತ 2ನೇ ತಂಡವಾಗಿ ಕ್ವಾರ್ಟರ್ ಫೈನಲ್ ತಲುಪಿದೆ. 3 ಜಯ, 1 ಸೋಲು ಹಾಗೂ 1 ಡ್ರಾ ನೊಂದಿಗೆ ಭಾರತ ಬಿ‌ ಗುಂಪಿನಲ್ಲಿ ಒಟ್ಟು 7 ಅಂಕ ಗಳಿಸಿ ಕ್ವಾರ್ಟರ್ ಫೈನಲ್ ತಲುಪಿದೆ. 
ಇದೇ ಬಿ ಗುಂಪಿನಲ್ಲಿ ಕಳೆದ ಬಾರಿಯ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಬೆಲ್ಜಿಯಂ ಭಾರತವನ್ನು ಸೋಲಿಸಿ ಮೊದಲ ಸ್ಥಾನ ಪಡೆದಿದೆ.
ಉಳಿದಂತೆ ಬಿ ಗುಂಪಿನಲ್ಲಿ 
ಅರ್ಜೆಂಟೀನಾ ಮತ್ತು ಆಸ್ಟ್ರೇಲಿಯಾ ತಂಡಗಳು ಕ್ವಾರ್ಟರ್ ಫೈನಲ್ ತಲುಪಿವೆ.

ಮತ್ತೊಂದೆಡೆ ಎ ಗುಂಪಿನಲ್ಲಿ ಜರ್ಮನಿ, ಸ್ಪೇನ್, ನೆದರ್ಲೆಂಡ್ಸ್‌ ಹಾಗೂ ಗ್ರೇಟ್ ಬ್ರಿಟನ್ ತಂಡಗಳು ಕ್ವಾರ್ಟರ್ ಫೈನಲ್ ತಲುಪಿವೆ.  

ಇಂದು (ಆಗಸ್ಟ್ 3) ರಾತ್ರಿ ಭಾರತೀಯ ಕಾಲಮಾನ 11:15 ಕ್ಕೆ ಸರಿಯಾಗಿ ನಡೆಯಲಿರುವ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜರ್ಮನಿ ತಂಡ ಅರ್ಜೆಂಟೀನಾ ತಂಡವನ್ನು ಎದುರಿಸಲಿದೆ.


ನಾಳೆ ಭಾನುವಾರ (ಆಗಸ್ಟ್ 4) ಭಾರತೀಯ ಕಾಲಮಾನ ಮಧ್ಯಾಹ್ನ 1:30 ಕ್ಕೆ ಸರಿಯಾಗಿ ಭಾರತ ತಂಡ 2ನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ತಂಡವನ್ನು ಎದುರಿಸಲಿದೆ.
ಕಳೆದ 2020 ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕೂಡ ಭಾರತ ಮತ್ತು ಗ್ರೇಟ್ ಬ್ರಿಟನ್ ತಂಡಗಳು ಕ್ವಾರ್ಟರ್ ಫೈನಲ್ ನಲ್ಲಿ ಸೆಣಸಾಡಿದ್ದವು. ಆ ಪಂದ್ಯದಲ್ಲಿ ಭಾರತ ಗೆದ್ದು ಸೆಮಿಫೈನಲ್ ತಲುಪಿತ್ತು. ಆದರೆ ಸೆಮಿಫೈನಲ್ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ ಭಾರತ ಸೋತಿತ್ತು. ಈ ಬಾರಿಯೂ ಭಾರತ ಅಷ್ಟೇನೂ ಬಲಿಷ್ಠವಲ್ಲದ ತಂಡವಾದ ಗ್ರೇಟ್ ಬ್ರಿಟನ್ ತಂಡವನ್ನು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲಿಸಿ ಸೆಮಿಫೈನಲ್ ತಲುಪಲು ನಾಳೆ ಸಜ್ಜಾಗಿದೆ.

ಕ್ವಾರ್ಟರ್ ಫೈನಲ್ ಪಂದ್ಯಗಳ ಪಟ್ಟಿ ಇಂತಿದೆ...

ಜರ್ಮನಿ vs ಅರ್ಜೆಂಟೀನಾ,

ಭಾರತ vs ಗ್ರೇಟ್ ಬ್ರಿಟನ್

ನೆದರ್ಲ್ಯಾಂಡ್ಸ್ vs ಆಸ್ಟ್ರೇಲಿಯಾ

ಬೆಲ್ಜಿಯಂ vs ಸ್ಪೇನ್

author single

L Ramprasad

Managing Director

comments

No Reviews