ನನಗೆ ಮೋಸ ಮಾಡಿ ಮೂವರೊಂದಿಗೆ ಇದ್ದ ಮಹಾಲಕ್ಷ್ಮಿ ಕೊಂದೆ: ಡೆತ್ ನೋಟ್ ಬರೆದಿಟ್ಟು ಕೊಲೆಗಾರ ಆತ್ಮಹತ್ಯೆ
2024-09-26 02:31:01
ಬೆಂಗಳೂರು, ಸೆ.26: ನಗರದ
ವೈಯಾಲಿಕಾವಲ್ ಮಹಾಲಕ್ಷ್ಮಿ ಕೊಲೆಗೈದು ಹಂತಕ ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಖಚಿತವಾಗಿದೆ.
ಬೆಂಗಳೂರು ಪೊಲೀಸರು ಮಹಾಲಕ್ಷ್ಮಿ ಕೊಲೆಗಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಖಚಿತ ಮಾಹಿತಿ ನೀಡಿದ್ದಾರೆ. ಮಹಾಲಕ್ಷ್ಮಿ ಕೊಲೆ ಮಾಡಿದ್ದ ಆರೋಪಿ ಬಳಿಕ ತನ್ನ ಸ್ವಂತ ಊರು ಒಡಿಶಾದ ಭದ್ರಕ್ ಜಿಲ್ಲೆಯ ಗ್ರಾವಿಯಾರ್ಡ್ ಗ್ರಾಮಕ್ಕೆ ಎಸ್ಕೇಪ್ ಆಗಿದ್ದ.
ಆದತೆ ಸ್ವಂತ ಊರಿನ ಸ್ಮಶಾನದ ಬಳಿಯ ಮರವೊಂದಕ್ಕೆ ಆತ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಶವದ ಪಕ್ಕದಲ್ಲಿ ಸ್ಕೂಟರ್, ಡೈರಿ, ಲ್ಯಾಪ್ಟಾಪ್ ಪತ್ತೆಯಾಗಿದ್ದು, ಆತ್ಮಹತ್ಯೆ ಸಂಬಂಧ ಧುಸುರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಆರೋಪಿ ಪೊಲೀಸರು ಬಂಧಿಸುತ್ತಾರೆ ಎಂಬ ಭಯದಲ್ಲೇ ಮುಕ್ತಿ ರಂಜನ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಒಡಿಶಾದ ಪಂಡಿ ಬಳಿಯ ಬೂತಕಪುರದಲ್ಲಿ ಮುಕ್ತಿ ನೇಣಿಗೆ ಶರಣಾಗಿದ್ದಾನೆ. ಮಹಾಲಕ್ಷ್ಮಿನ ಕೊಲೆ ಮಾಡಿದ ಬಳಿಕ ತನ್ನ ತಮ್ಮನ ಬಳಿ ಎಲ್ಲಾ ವಿಚಾರ ಹೇಳಿಕೊಂಡಿದ್ದ ಮುಕ್ತಿ, ನಾನು ಮಹಾಲಕ್ಷ್ಮಿಯನ್ನ ತುಂಬಾನೇ ಪ್ರೀತಿ ಮಾಡುತ್ತಿದ್ದೆ. ಆದರೆ ಮಹಾಲಕ್ಷ್ಮಿ ನನ್ನ ಪ್ರೀತಿಗೆ ಮೋಸ ಮಾಡಿ ಇನ್ನು ಮೂವರೊಂದಿಗೆ ಸಂಪರ್ಕದಲ್ಲಿದ್ದಳು.
ಹೀಗಾಗಿ ಅವಳನ್ನ ಕೊಲೆ ಮಾಡಿ ಮೃತದೇಹವನ್ನು ತುಂಡುಗಳನ್ನಾಗಿ ಮಾಡಿದ್ದೇನೆ. ನಾನು ಊರಿಗೆ ಹೋಗುತ್ತಿದ್ದೇನೆ ಎಂದಿದ್ದ. ಊರಿಗೆ ಹೋದ ಮಗನ ಬಚ್ಚಿಡುವ ಕೆಲಸ ಆತನ ತಾಯಿಯಿಂದಲೇ ನಡೆದಿದೆಯಂತೆ. ಪಶ್ಚಿಮ ಬಂಗಾಳದಲ್ಲಿ ತಲೆಮರೆಸಿಕೊಳ್ಳೊದಕ್ಕೆ ಮುಕ್ತಿ ತಾಯಿ ವ್ಯವಸ್ಥೆ ಮಾಡಿದ್ದಳಂತೆ. ಆದರೆ ಪೊಲೀಸರು ಮುಕ್ತಿ ರಂಜನ್ ರಾಯ್ ಸೋದರನ ಮೂಲಕ ಟ್ರ್ಯಾಪ್ ಮಾಡುವ ಕೆಲಸ ಮಾಡುತ್ತಿದ್ದರು. ಇನ್ನು ಪೊಲೀಸರಿಗೆ ಸಿಕ್ಕಿಬೀಳುವ ಭಯದಲ್ಲಿ ಒಡಿಶಾಗೆ ಮುಕ್ತಿ ರಂಜನ್ ರಾಯ್ ಪಲಾಯನ ಮಾಡಿ ಅಲ್ಲಿ ಆತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
comments
Log in to write reviews