ರಾಜ್ಯದಲ್ಲಿ ಜೂನ್, ಜುಲೈನಲ್ಲಿ ಸುರಿದ ಮಳೆ ಎಷ್ಟು? ಮುಂದೆ ಎಷ್ಟು ಮಳೆಯಾಗಲಿದೆ? ಇಲ್ಲಿದೆ ಮಾಹಿತಿ....

ರಾಜ್ಯದಲ್ಲಿ ಜೂನ್, ಜುಲೈನಲ್ಲಿ ಸುರಿದ ಮಳೆ ಎಷ್ಟು? ಮುಂದೆ ಎಷ್ಟು ಮಳೆಯಾಗಲಿದೆ? ಇಲ್ಲಿದೆ ಮಾಹಿತಿ....

2024-08-03 17:06:48

ಬೆಂಗಳೂರು, ಆಗಸ್ಟ್3: ಕರಾವಳಿ ಸಮುದ್ರ ತೀರದಲ್ಲಿ ಗಾಳಿ ಪರಿವರ್ತನೆ ಹಿನ್ನಲೆ ಇಂದಿನಿಂದ ಆಗಸ್ಟ್​​ 6ರ ವರೆಗೆ ಕರ್ನಾಟಕದಲ್ಲಿ ವ್ಯಾಪಕ ಮಳೆ ಆಗಲಿದೆ. ಬೆಂಗಳೂರಿನಲ್ಲಿ ಕೂಡ ಹಲವೆಡೆ ಹಗುರದಿಂದ ಕುಡಿದ ಸಾಧಾರಣ ಮಳೆಯಗುವ ಸಾಧ್ಯತೆ ಎಂದು ಹವಾಮಾನ ಇಲಾಖೆ ತಜ್ಞ ಸಿ.ಎಸ್ ಪಾಟೀಲ್​​ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಜೂನ್ 1 ರಿಂದ ಜುಲೈ 31ರ ವರೆಗೆ ರಾಜ್ಯಾದ್ಯಂತ ಶೇಕಡ 29 ರಷ್ಟು ಹೆಚ್ಚುವರಿ ಮಳೆಯಾಗಿದೆ ಎಂದು ಹೇಳಿದ್ದಾರೆ.

ಜೂನ್ 1 ರಿಂದ ಜುಲೈ 31ರ ವರೆಗೆ ರಾಜ್ಯಾದ್ಯಂತ ಹೆಚ್ಚುವರಿ ಮಳೆ


ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ 19 ಸೆ.ಮೀ, ಪುತ್ತೂರಿನಲ್ಲಿ 16 ಸೆ.ಮೀ ಮಳೆಯಾಗಿದೆ.  ಜೂನ್ 1 ರಿಂದ ಜುಲೈ 31ರ ವರೆಗೆ ರಾಜ್ಯಾದ್ಯಂತ ಶೇಕಡ 29 ರಷ್ಟು ಹೆಚ್ಚುವರಿ ಮಳೆಯಾಗಿದೆ. ಕರಾವಳಿಯಲ್ಲಿ 29%, ಉತ್ತರ ಒಳನಾಡು 23, ಹಾಗೂ ದಕ್ಷಿಣ ಒಳನಾಡು 32% ಹೆಚ್ಚುವರಿ ಮಳೆ ಆಗಿದೆ.

ಕಲಬುರಗಿ ಹಾಗೂ ಯಾದಗಿರಿ ಹೊರತುಪಡಿಸಿದರೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಾಡಿಕೆ ಮಳೆ ಆಗಿದೆ.  ಪೂರ್ವ ಅರಬ್ಬೀ ಸಮುದ್ರದ ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ಹಾಗೂ ಕೇರಳ ಕಡಲ ತೀರದಲ್ಲಿ ಸುಳಿಗಾಳಿ ಮುಂದುವರೆದಿರುವುದೇ ಜೂನ್ ಹಾಗೂ ಜುಲೈ ತಿಂಗಳಲ್ಲಿ ಹೆಚ್ಚುವರಿ ಮಳೆಗೆ ಮುಖ್ಯ ಕಾರಣ ಎಂದಿದ್ದಾರೆ.

18° ಯಿಂದ 20° ಉತ್ತರ ಅಕ್ಷಾಂಶದಲ್ಲಿ 3.1 ಕಿ.ಮೀ.ನಿಂದ 5.8 ಕಿ.ಮೀ.ವರೆಗಿನ ಅಂತರದಲ್ಲಿ ಸತತವಾಗಿ ಸೀಯರ್ ಝೋನ್ ಇತ್ತು. ಪ್ರೆಶರ್ ಗ್ರೆಡಿಯಂಟ್ (ಒತ್ತಡ) ಪರಿಣಾಮ ಗಾಳಿಯ ವೇಗ ಗಂಟೆಗೆ 40ರಿಂದ 50 ಕಿ.ಮೀ. ಬಂಗಾಳ ಸಮುದ್ರದಲ್ಲಿ ವಾಯುಭಾರ ಕುಸಿತ ಹಾಗೂ 5.8 ಕಿ.ಮೀ‌‌.ವರೆಗೆ ಗಾಳಿಯ ಪರಿಚಲನೆ ಇದೆ. ಈ ಎಲ್ಲಾ ಹವಾಮಾನ ವೈಪರಿತ್ಯ ಪರಿಣಾಮ ಜೂನ್ ಹಾಗೂ ಜುಲೈ ತಿಂಗಳಲ್ಲಿ ಹೆಚ್ಚಿನ ಮಳೆಯಾಗಿದೆ ಎಂದು ತಿಳಿಸಿದ್ದಾರೆ.

ಉತ್ತರ ಒಳನಾಡು, ದಕ್ಷಿಣ ಒಳನಾಡಿನ ಹಲವೆಡೆ ಮಳೆ
ಉತ್ತರ ಒಳನಾಡು, ದಕ್ಷಿಣ ಒಳನಾಡಿನ ಹಲವೆಡೆ ಮಳೆಯಾಗಲಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಭಾರಿ ಮಳೆ ಹಿನ್ನೆಲೆ ಆಗಸ್ಟ್ 4ರವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಆಗಸ್ಟ್ 3, 4ರಂದು 3 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಮತ್ತು ಆಗಸ್ಟ್ 5, 6ರಂದು ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಇಂದು ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಆಗಸ್ಟ್ 6ರವರೆಗೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಜ್ಞ ಸಿ.ಎಸ್.ಪಾಟೀಲ್ ಹೇಳಿದ್ದಾರೆ.

author single

L Ramprasad

Managing Director

comments

No Reviews