ರಾಜ್ಯದ 12 ಕ್ಕೂ ಹೆಚ್ಚಿನ ಜಿಲ್ಲೆಗಳಲ್ಲಿ 3 ದಿನ ಭಾರಿ ಮಳೆ!
2024-09-05 02:00:11
ಬೆಂಗಳೂರು, ಸೆ.5: ರಾಜ್ಯದ 12ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮುಂದಿನ 3 ದಿನಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ವಿಜಯನಗರ, ತುಮಕೂರು, ರಾಮನಗರ, ಮೈಸೂರು, ಮಂಡ್ಯ, ಕೋಲಾರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಜಿಲ್ಲೆಗಳಲ್ಲೂ ಸಹ ಮಳೆಯಾಗಲಿದೆ.
ಈ ಪ್ರದೇಶಗಳಲ್ಲಿ ಮಳೆಯಾಗಿದೆ...
ಕ್ಯಾಸಲ್ರಾಕ್, ಬೀದರ್, ಭಾಲ್ಕಿ, ಆಗುಂಬೆ, ಗಬ್ಬೂರು, ರಾಯಚೂರು, ಶೋರಾಪುರ, ಗೇರುಸೊಪ್ಪ, ಲೋಂಡಾ, ಮುನ್ನಳ್ಳಿ, ಸಿದ್ದಾಪುರ, ಧರ್ಮಸ್ಥಳ, ಕಲಘಟಗಿ, ಕವಡಿಮಟ್ಟಿ, ದೇವದುರ್ಗ, ದೇವರಹಿಪ್ಪರಗಿ, ಔರಾದ್, ಸಿಂಧನೂರು, ಶೃಂಗೇರಿ, ಮಂಕಿ, ಕದ್ರಾ, ಬೆಳ್ತಂಗಡಿ, ಹಳಿಯಾಳದಲ್ಲಿ ಮಳೆಯಾಗಿದೆ.
ಉಡುಪಿ, ಕಾರ್ಕಳ, ಶಹಾಪುರ, ಕಮ್ಮರಡಿ, ಕೊಪ್ಪ, ಎನ್ಆರ್ಪುರ, ಗೋಕರ್ಣ, ಹೊನ್ನಾವರ, ಧಾರವಾಡ, ಕುಂದಗೋಳ, ಕುರ್ಡಿ, ಕೂಡಲಸಂಗಮ, ಹುಬ್ಬಳ್ಳಿ, ಮಾನ್ವಿ, ಕೂಡಲಸಂಗಮ, ಜಯಪುರ, ಕೊಟ್ಟಿಗೆಹಾರ, ಕಳಸದಲ್ಲಿ ಮಳೆಯಾಗಿದೆ.
ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗುತ್ತಿದೆ.
comments
Log in to write reviews