ಹರ್ಯಾಣ ವಿಧಾನಸಭಾ ಚುನಾವಣೆ: ಬಿಜೆಪಿಗೆ ಒಲಿದ ಸಿಂಹಾಸನ!

ಹರ್ಯಾಣ ವಿಧಾನಸಭಾ ಚುನಾವಣೆ: ಬಿಜೆಪಿಗೆ ಒಲಿದ ಸಿಂಹಾಸನ!

2024-10-09 08:09:15

ಚಂಡೀಗಢ: ಹರ್ಯಾಣ ರಾಜ್ಯದ 2024 ರ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಸತತ 3ನೇ ಬಾರಿಗೆ ಅಧಿಕಾರ ಗಳಿಸಿದೆ

ಇಂದು (ಅಕ್ಟೋಬರ್ 8) ಬೆಳಗ್ಗೆ 8 ಗಂಟೆಯಿಂದ ಚಂಡೀಗಢದಲ್ಲಿ ನಡೆದ ಹರ್ಯಾಣ ರಾಜ್ಯದ 90 ಕ್ಷೇತ್ರಗಳ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟಿಸಲು ಮತ ಎಣಿಕೆ ಭರದಿಂದ ಸಾಗಿತು. ‌
ಆರಂಭದಲ್ಲೇ ಚುನಾವಣೋತ್ತರ ಸಮೀಕ್ಷೆಗಳ ಸಂಭವನೀಯ ಫಲಿತಾಂಶವನ್ನು ಸುಳ್ಳಾಗಿಸುವಂತೆ ಮತ್ತೆ ಆಡಳಿತಾರೂಢ ಬಿಜೆಪಿಯೇ ಸ್ಪಷ್ಟ ಬಹುಮತದತ್ತ ಹೆಜ್ಜೆ ಹಾಕಿತು. ಇಷ್ಟಾದರೂ ಮಾಜಿ ಮುಖ್ಯಮಂತ್ರಿ ಭೂಪೇಂದರ್ ಸಿಂಗ್ ಹೂಡಾ ನೇತೃತ್ವದ ಕಾಂಗ್ರೆಸ್ ಪಕ್ಷ ನಿಕಟ ಪೈಪೋಟಿ ನೀಡಿ ಕೊನೆಯ ಹಂತದವರೆಗೂ ರೋಮಾಂಚಕಾರಿ ಫಲಿತಾಂಶ ಬರುವ ಸಾಧ್ಯತೆಯನ್ನು ಸೃಷ್ಟಿಸಿತ್ತು. ಆದರೆ ಕೊನೆಯ ಭಾಗದಲ್ಲಿ ಬಿಜೆಪಿ ನಿಗದಿತ 90 ವಿಧಾನಸಭಾ ಕ್ಷೇತ್ರಗಳ ಪೈಕಿ 48 ಕ್ಷೇತ್ರಗಳಲ್ಲಿ ಜಯ ಗಳಿಸಿ 3ನೇ ಬಾರಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಪಡೆಯಿತು.
ವಿರೋಧ ಪಕ್ಷ ಕಾಂಗ್ರೆಸ್ 37 ಕ್ಷೇತ್ರಗಳಲ್ಲಿ ಜಯ ಗಳಿಸಿ ಬಹುಮತದಿಂದ ಕೇವಲ 8 ಸ್ಥಾನಗಳಿಂದ ವಂಚಿತವಾಯಿತು.
ರಾಷ್ಟ್ರೀಯ ಲೋಕದಳ ಪಕ್ಷ 2 ಸ್ಥಾನ ಗೆದ್ದರೆ, ಪಕ್ಷೇತರರು ಸೇರಿಕೊಂಡು ಇತರರು ಉಳಿದ.3 ಸ್ಥಾನಗಳನ್ನು ಗೆದ್ದುಕೊಂಡಿದ್ದಾರೆ.
ಕಳೆದ 2024ನೇ ವರ್ಷದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಹಿಳಾ ಕುಸ್ತಿ ವಿಭಾಗದ 50. ಕೆಜಿ ಸ್ಪರ್ಧೆಯಲ್ಲಿ ಫೈನಲ್ ತಲುಪಿ ಕನಿಷ್ಟ ಬೆಳ್ಳಿ ಪದಕ ಖಚಿತಪಡಿಸಿಕೊಂಡು ಚಿನ್ನದ ಪದಕಕ್ಕೆ ಸ್ಪರ್ಧೆ ಒಡ್ಡಿದ್ದ ಭಾರತದ ವಿನೇಶ್ ಪೊಗಟ್ ಅವರು ಸ್ಪರ್ಧೆಯ ಹಿಂದಿನ ರಾತ್ರಿ ನಿದ್ದೆ ಮಾಡದೆ ಜಿಮ್ ಮಾಡಿ ಉಗುರುಗಳನ್ನು ಕತ್ತರಿಸಿ, ಕೂದಲು ಕತ್ತರಿಸಿಕೊಂಡರೂ ಸಹ ಹೆಚ್ಚಿನ  100 ಗ್ರಾಂ ತೂಕ ಕಡಿಮೆ ಮಾಡಿಕೊಂಡು 50 ಕೆಜಿ ತೂಕದ ಫೈನಲ್ ಸ್ಪರ್ಧೆಯಿಂದ ಅಮಾನತುಗೊಂಡು ಕನಿಷ್ಠ ಪಕ್ಷ ಕಂಚಿನ ಪದಕಕ್ಕೂ ಅರ್ಹರಾಗಲಿಲ್ಲ. ಒಲಂಪಿಕ್ಸ್ ಕುಸ್ತಿ ಪಟುಗಳ ವಂಶದಲ್ಲಿ ಜನಿಸಿದ್ದ ವಿನೇಶ್ ಪೊಗಟ್ ಅವರಿಗೆ ಈ ಅವಮಾನವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದರಿಂದ ಅತ್ತು ಅತ್ತು ಕೊನೆಗೆ ರಾಜಕೀಯ ಸೇರಲು ನಿರ್ಧರಿಸಿದಾಗ ಸ್ವತಃ ಅವರಿಗೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರೇ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸಿ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಜೂಲಾನಾ ಕ್ಷೇತ್ರದ ಟಿಕೆಟ್ ಕೊಟ್ಟರು.
ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ವಿನೇಶ್ ಪೊಗಟ್ ಅವರು ಬಿಜೆಪಿ ಅಭ್ಯರ್ಥಿ ಯೋಗೇಶ್ ಕುಮಾರ್ ಅವರನ್ನು 6,015 ಮತಗಳಿಂದ ಸೋಲಿಸಿ ಮೊಟ್ಟಮೊದಲ ಬಾರಿಗೆ ಹರ್ಯಾಣ ರಾಜ್ಯದ ಶಾಸಕಿಯಾಗಿ ಆಯ್ಕೆಯಾದರು.
ವಿನೇಶ್ ಪೊಗಟ್ ಅವರು 65,080 ಮತಗಳನ್ನು ಗಳಿಸಿದರೆ, ಅವರ ಪ್ರತಿಸ್ಪರ್ಧಿ ಬಿಜೆಪಿಯ ಯೋಗೇಶ್ ಕುಮಾರ್ 59,065 ಮತಗಳನ್ನು ಮಾತ್ರ ಪಡೆದು ಸೋಲು ಕಂಡರು.

author single

L Ramprasad

Managing Director

comments

No Reviews