ಮುಜರಾಯಿ ಇಲಾಖೆಗೆ ಸೇರಿದ ಗುಟ್ಟೆ ಆಂಜನೇಯ ದೇಗುಲ ಮುಸ್ಲಿಂ ಸ್ಮಶಾನವೆಂದು ನಮೂದು!
2024-11-11 10:20:30
ಚಿಕ್ಕಬಳ್ಳಾಪುರ, ನವೆಂಬರ್ 11: ಉಪ ಚುನಾವಣೆಯ ಕಾವಿನ ನಡುವೆ ವಕ್ಫ್ (Waqf) ವಿವಾದ ಕೂಡ ಕರ್ನಾಟಕದಾದ್ಯಂತ ಧಗಧಗಿಸುತ್ತಿದೆ. ಪ್ರತಿ ಹಳ್ಳಿ ಹಳ್ಳಗೂ ವಕ್ಫ್ ವಿವಾದ ಈಗಾಗಲೇ ಕಾಲಿಟ್ಟಿದೆ. ಇದೀಗ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬೆಳ್ಳೂಟಿ ಗೇಟ್ ಬಳಿ ಇರುವ ಐತಿಹಾಸ ಪುರಾಣ ಪ್ರಸಿದ್ದ ಶ್ರೀ ಗುಟ್ಟೆ ಆಂಜನೇಯಸ್ವಾಮಿ ದೇವಸ್ಥಾನದ ಮೇಲೂ ಇದೀಗ ವಕ್ಫ್ ಬೋರ್ಡ್ ಕಣ್ಣು ಬಿದ್ದಿದೆ.
ಮುಜರಾಯಿ ಇಲಾಖೆಗೆ ಸೇರಿದ ದೇಗುಲವನ್ನು ಖಬರಸ್ತಾನ ಸ್ಮಶಾನ ವಕ್ಫ್ ಆಸ್ತಿ ಎಂದು ನಮೂದಿಸಲಾಗಿದೆ. ಹೀಗಾಗಿ ವಕ್ಫ್ ಮಂಡಳಿ ಹಾಗೂ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ದಾಖಲೆ ತಿದ್ದುಪಡಿ ಮಾಡುವಂತೆ ಒತ್ತಾಯಿಸಲಾಗಿದೆ.
ತಾಲೂಕು ಕಚೇರಿಗೆ ಮುತ್ತಿಗೆ
ಘಟನೆ ಹಿನ್ನೆಲೆ ಕಂದಾಯ ದಾಖಲೆ ತಿದ್ದುಪಡಿ ಮಾಡುವಂತೆ ಒತ್ತಾಯಿಸಿ ಬಿಜೆಪಿಯಿಂದ ಪ್ರತಿಭಟನೆ ಮಾಡಲಾಗಿದೆ. ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ತಹಶೀಲ್ದಾರ್ಗೆ ಮನವಿ ಸಲ್ಲಿಸಲಾಗಿದೆ. ಈ ವೇಳೆ ಮಾತನಾಡಿದ ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ, ಸಚಿವ ಜಮೀರ್ ಅಹಮ್ಮದ್ಗೆ ಗ್ರಹಚಾರ ಕಾದಿದೆ ಎಂದು ವಾಗ್ದಾಳಿ ಮಾಡಿದ್ದಾರೆ. ರೈತರ ಜಮೀನು ದೇವಸ್ಥಾನಗಳ ಆಸ್ತಿಗಳನ್ನು ವಕ್ಫ್ ಆಸ್ತಿ ಎಂದು ದಾಖಲೆ ತಿದ್ದುಪಡಿ ಮಾಡುತ್ತಿದ್ದಾರೆ. ರೈತರು ತಮ್ಮ ತಮ್ಮ ಆಸ್ತಿಗಳ ದಾಖಲೆಗಳನ್ನು ಪರಿಶೀಲನೆ ಮಾಡುವಂತೆ ಮನವಿ ಮಾಡಿದ್ದಾರೆ.
ಇನ್ನು ಇತ್ತೀಚೆಗೆ ನಗರದ ಕಂದವಾರದಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಓದಿದ ಸರ್ಕಾರಿ ಶಾಲೆ ಕೂಡ ವಕ್ಫ್ ಮಂಡಳಿಗೆ ಸೇರಿಸಲಾಗಿತ್ತು. ಗ್ರಾಮದ ಸರ್ವೆ ನಂಬರ್ 1 ರಲ್ಲಿ 19 ಗುಂಟೆ ಜಮೀನಿನಲ್ಲೇ ನೂರಾರು ವರ್ಷಗಳಿಂದ ಶಾಲೆ ಇದೆ. ಆದರೆ 2018ರಿಂದ ಇತ್ತಿಚಿಗೆ ವಕ್ಫ್ ಆಸ್ತಿ ಎಂದು ನಮೂದಿಸಲಾಗಿತ್ತು. ವಕ್ಫ್ ನಡೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ಕೂಡಲೇ ದಾಖಲೆ ಸರಿಪಡಿಸುವಂತೆ ಆಗ್ರಹಿಸಿದ್ದರು.
ಇಂದು ಬಾಗಲಕೋಟೆಯಲ್ಲಿ ಸರ್ಕಾರಿ ಕಚೇರಿಗಳಿಗೆ ಬಂತು ನೋಟಿಸ್!
ಇನ್ನು ಬಾದಾಮಿ ಪಟ್ಟಣದ ಮಲಪ್ರಭಾ ಎಡದಂಡೆ ಕಾಲುವೆ ಇಂಜಿನಿಯರಿಂಗ್ ಕಚೇರಿ, ನಿರ್ಮಾಣ ಹಂತದ ಮಿನಿ ವಿಧಾನಸೌಧ ಕಟ್ಟಡದ ಜಾಗ, ಶಿರೂರಿನಲ್ಲಿ ಸರ್ವೆ ನಂ.92ರಲ್ಲಿರುವ 54 ಎಕರೆ 2 ಗುಂಟೆ ಜಾಗ, ಮುರಾರ್ಜಿ ದೇಸಾಯಿ ವಸತಿ ಶಾಲೆ, ಹೆಸ್ಕಾಂ ಕಚೇರಿ, ಅಂಬೇಡ್ಕರ್ ಬಾಲಕಿಯರ ವಸತಿ ನಿಲಯ, 2 ಸರ್ಕಾರಿ ಶಾಲೆ, 2 ಅಂಗನವಾಡಿ ಕೇಂದ್ರ, ನೀರಿನ ಟ್ಯಾಂಕ್, 1200 ಆಶ್ರಯ ಮನೆಗಳು ಇರುವ ಜಾಗ ವಕ್ಫ್ಗೆ ಸೇರಿದ್ದು ಎಂದು ಪಹಣಿಯಲ್ಲಿ ನಮೂದಾಗಿತ್ತು.
comments
Log in to write reviews