ಮುಡಾ ಹಗರಣ: ಹಿಂದಿನ ಮುಡಾ ಆಯುಕ್ತ ಸಸ್ಪೆಂಡ್!!

ಮುಡಾ ಹಗರಣ: ಹಿಂದಿನ ಮುಡಾ ಆಯುಕ್ತ ಸಸ್ಪೆಂಡ್!!

2024-09-03 10:32:58

ಮೈಸೂರಿನ ಮುಡಾ ಸೈಟ್ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಅಧಿಕಾರಕ್ಕೇ ಕುತ್ತು ಬಂದಿದೆ. ಈ ಹಿನ್ನೆಲೆಯಲ್ಲಿ ಮುಡಾ ಹಗರಣಕ್ಕೆ ಕಾರಣವಾಗಿದ್ದರು ಎನ್ನಲಾದ ಹಿಂದಿನ ಮುಡಾ ಆಯುಕ್ತ(ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ) ಜಿ.ಟಿ ದಿನೇಶ್ ಕುಮಾರ್ ಅವರನ್ನು ಅಮಾನತುಗೊಳಿಸಿ ರಾಜ್ಯಸರ್ಕಾರ ಆದೇಶ ಹೊರಡಿಸಿದೆ‌.
ಜಿ.ಟಿ ದಿನೇಶ್ ಕುಮಾರ್ ಅವರು ಈಗಾಗಲೇ ವರ್ಗಾವಣೆಗೊಂಡು ಹಾವೇರಿ ವಿಶ್ವವಿದ್ಯಾಲಯದ ಕುಲಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಅವರು ಸದ್ಯ ಅಧಿಕಾರದಲ್ಲಿ ಮುಂದುವರೆದರೆ  ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಅವರ ವಿರುದ್ಧ ಇಲಾಖಾ ವಿಚಾರಣೆಯನ್ನು ಬಾಕಿಯಿರಿಸಿ ಸೇವೆಯಿಂದ ಅಮಾನತುಗೊಳಿಸಲು ತೀರ್ಮಾನಿಸಲಾಗಿದೆ ಎಂದು ರಾಜ್ಯಸರ್ಕಾರದ ಆದೇಶ ಪ್ರತಿಯಲ್ಲಿ ತಿಳಿಸಲಾಗಿದೆ.


 

author single

L Ramprasad

Managing Director

comments

No Reviews