ಕರಾವಳಿ, ದಕ್ಷಿಣ ಒಳನಾಡಿಗೆ ಆರೆಂಜ್ ಅಲರ್ಟ್: 2 ದಿನ ಭಾರಿ ಮಳೆ

ಕರಾವಳಿ, ದಕ್ಷಿಣ ಒಳನಾಡಿಗೆ ಆರೆಂಜ್ ಅಲರ್ಟ್: 2 ದಿನ ಭಾರಿ ಮಳೆ

2024-08-16 01:55:40

ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ಘೋಷಿಸಲಾಗಿದ್ದು, ಮುಂದಿನ 2 ದಿನ ಭಾರಿ ಮಳೆಯಾಗುವ ನಿರೀಕ್ಷೆ ಇದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ.

ಇನ್ನು ತುಮಕೂರು, ಶಿವಮೊಗ್ಗ, ಮೈಸೂರು, ಕೊಡಗು, ಹಾಸನ, ಬಳ್ಳಾರಿ, ಯಾದಗಿರಿ, ರಾಯಚೂರು, ಕೊಪ್ಪಳ, ಗದಗ, ಧಾರವಾಡ, ಬೆಳಗಾವಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಬೀದರ್, ಹಾವೇರಿ, ಕಲಬುರಗಿ, ವಿಜಯಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ರಾಮನಗರ, ವಿಜಯನಗರ ಜಿಲ್ಲೆಗಳಲ್ಲೂ ಮಳೆಯಾಗಲಿದೆ.

ನಿನ್ನೆ ಇಲ್ಲೆಲ್ಲಾ ಮಳೆಯಾಗಿದೆ..
ಗಂಗಾವತಿ, ಧರ್ಮಸ್ಥಳ, ರೋಣ, ಬೆಳ್ತಂಗಡಿ, ಬಾದಾಮಿ, ತ್ಯಾಗರ್ತಿ, ಪುತ್ತೂರು, ಅಜ್ಜಂಪುರ, ಕುಡತಿನಿ, ನಾಯಕನಹಟ್ಟಿ, ಎಂಎಂಹಿಲ್ಸ್​, ಬನವಾಸಿ, ಮಾಣಿ, ಪಣಂಬೂರು, ಸಿದ್ದಾಪುರ, ಉಪ್ಪಿನಂಗಡಿ, ಕಾರ್ಕಳ, ಮಂಗಳೂರು, ಗದಗ, ಕುಷ್ಟಗಿ, ಬೆಳ್ಳಟ್ಟಿ, ಬೈಲಹೊಂಗಲ, ಹೊನ್ನಾಳಿ, ತರೀಕೆರೆ, ಗುಂಡ್ಲುಪೇಟೆ, ಶಿವಮೊಗ್ಗ, ಕಳಸ, ಕಡೂರು, ಎನ್​ಆರ್​ಪುರ, ಲಿಂಗನಮಕ್ಕಿ, ಕೊಳ್ಳೇಗಾಲ, ಚನ್ನಗಿರಿ, ಭಾಗಮಂಡಲ, ಯಗಟಿಯಲ್ಲಿ ಮಳೆಯಾಗಿದೆ.

ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದು, ಮಳೆಯಾಗುವ ಸಾಧ್ಯತೆ ಇದೆ.

author single

L Ramprasad

Managing Director

comments

No Reviews