24ನೇ ಎಸಿಎಂಎಂ ಕೋರ್ಟ್ ಗೆ SPP ಮೂಲಕ ಚಾರ್ಜ್ ಶೀಟ್ ಸಲ್ಲಿಕೆ ಆಗಲಿದೆ
2024-09-04 10:49:14
ಬೆಂಗಳೂರು, ಸೆ.4: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಇಂದು ಮಧ್ಯಾಹ್ನ ನಗರದ 24ನೇ ಎಸಿಎಂಎಂ ಕೋರ್ಟ್ ಗೆ SPP ಮೂಲಕ ಚಾರ್ಜ್ ಶೀಟ್ ಸಲ್ಲಿಕೆ ಆಗಲಿದೆ.
ಈ ಚಾರ್ಜ್ ಶೀಟ್ ನಲ್ಲಿ ಯಾರನ್ನು ಎ-1 ಆರೋಪಿ, ಎ- 2 ಆರೋಪಿ ಎಂದು ಕೋರ್ಟ್ ಗೆ ಸಲ್ಲಿಸಲಾಗುತ್ತೆ? ಎಂಬ ಬಗ್ಗೆ ಇದೀಗ ಕುತೂಹಲ ಸೃಷ್ಟಿಯಾಗಿದೆ. ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಕೆ ಆಗುತ್ತಿರುವುದರಿಂದ ಇನ್ನು ದರ್ಶನ್ ಅವರು ಜಾಮೀನು ಕೋರಿ ಕೋರ್ಟ್ ಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಆದಾಗ್ಯೂ ರೇಣುಕಾಸ್ವಾಮಿ ಕೊಲೆ ಯಾರು ಮಾಡಿದ್ದಾರೆ? ಎಂಬ ಬಗ್ಗೆ ಚಾರ್ಜ್ ಶೀಟ್ ನಲ್ಲಿ ಯಾವ ಆರೋಪಿಗಳ ಹೆಸರುಗಳನ್ನು SPP ಉಲ್ಲೇಖಿಸಿದ್ದಾರೆ ಎಂಬ ಬಗ್ಗೆ ಸಹ ಇದೀಗ ರಾಜ್ಯಾದ್ಯಂತ ಕುತೂಹಲ ಸೃಷ್ಟಿಯಾಗಿದೆ.
comments
Log in to write reviews