ಮುಡಾ ಆಯುಕ್ತರ ನಿವಾಸದಲ್ಲಿದ್ದ ಸಿಸಿ ಕ್ಯಾಮೆರಾ, ಡಿವಿಡಿ ನಾಪತ್ತೆ!
2024-09-10 07:02:42
ಮೈಸೂರು, ಸೆ.10: ಮುಡಾ ಆಯುಕ್ತರ ನಿವಾಸದಲ್ಲಿದ್ದ ಸಿಸಿಟಿವಿ ಡಿವಿಆರ್ ನಾಪತ್ತೆಯಾಗಿದೆ.
ಮುಡಾ ಆಯುಕ್ತರ ಕಚೇರಿಗಿಂತ, ಆಯುಕ್ತರ ನಿವಾಸವನ್ನೇ ವ್ಯವಹಾರಕ್ಕೆ ಬದಲಾಯಿಸಿದ್ರಾ ಹಿಂದಿನ ಮುಡಾ ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ಎನ್ನುವ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಮೈಸೂರು ಮುಡಾ ಕೇಸ್ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಕರ್ತವ್ಯ ಲೋಪ ಅಕ್ರಮದಲ್ಲಿ ಭಾಗಿಯಾಗಿದ್ದಕ್ಕೆ ಸಸ್ಪೆಂಡ್ ಆಗಿರುವ ಜಿ.ಟಿ. ದಿನೇಶ್ ಕುಮಾರ್ ವಾಸವಿದ್ದ ಆಯುಕ್ತರ ನಿವಾಸದಲ್ಲಿ ಸಿಸಿಟಿವಿ, ಡಿವಿಆರ್ ನಾಪತ್ತೆಯಾಗಿರೋದು ಸಾಕಷ್ಟು ಅನುಮಾನ ಮೂಡಿಸಿದೆ.
ಮೈಸೂರಿನ ಕುವೆಂಪುನಗರದ ಆದಿಚುಂಚನಗಿರಿ ರಸ್ತೆಯ ಆಯುಕ್ತರ ನಿವಾಸದಲ್ಲಿ ಹಿಂದಿನ ಆಯುಕ್ತರು ಕಚೇರಿಗಿಂತ ಹೆಚ್ಚು ಇದೇ ನಿವಾಸದಲ್ಲಿ ಕಾರ್ಯನಿರ್ವಾಹಣೆ ಮಾಡುತ್ತಿದ್ದ ಬಗ್ಗೆ ಮಾಹಿತಿ ಇದೆ. 50:50 ಅನುಪಾತ, ಬದಲಿ ನಿವೇಶನ, ತುಂಡು ಭೂಮಿ ಅನ್ಯಕ್ರಾಂತ ಸೇರಿದಂತೆ ಹಲವು ವ್ಯವಹಾರಗಳಿಗೆ ಈ ನಿವಾಸ ಕೇಂದ್ರ ಬಿಂದುವಾಗಿತ್ತು ಅನ್ನೋ ಆರೋಪ ಇದೆ. ಇದೆಲ್ಲದಕ್ಕೂ ಸಾಕ್ಷಿಯಂತಿದ್ದ 8 ಸಿಸಿ ಕ್ಯಾಮರಾ ಡಿವಿಆರ್ ನಾಪತ್ತೆಯಾಗಿರುವುದು ಹಿಂದಿನ ಆಯುಕ್ತ ಜಿ.ಟಿ. ದಿನೇಶ್ ಮೇಲೆ ಅನುಮಾನ ಮೂಡಿಸಿದೆ.
ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಡಾ ನೂತನ ಆಯುಕ್ತ ರಘುನಂದನ್ , ಮುಡಾ ಕಟ್ಟಡ ನಿರ್ವಹಣೆ ಅಧಿಕಾರಿಗಳಿಗೆ ನೋಟಿಸ್ ಕೊಟ್ಟಿದ್ದೇನೆ. ಅಲ್ಲಿ ಇದ್ದ ಸಿಸಿ ಕ್ಯಾಮರಾ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಾಹಿತಿ ಕೇಳಿದ್ದು, ಎರಡು ದಿನಗಳಲ್ಲಿ ಮಾಹಿತಿ ತರಿಸಿಕೊಂಡು ಹೇಳುತ್ತೇನೆ ಎಂದಿದ್ದಾರೆ.
ಹೀಗಾಗಿ ಮುಡಾ ಆಯುಕ್ತದ ನಿವಾಸದಲ್ಲಿ ಸಾಕ್ಷ್ಯ ನಾಶ ಆರೋಪಕ್ಕೆ ಇಂಬು ನೀಡುವಂತೆ ಸಿಸಿಟಿವಿ, ಡಿವಿಆರ್ ನಾಪತ್ತೆ ಸಾಕಷ್ಟು ಆನುಮಾನ ಮೂಡಿಸಿದೆ. ಈ ಬಗ್ಗೆ ಅಧಿಕಾರಿಗಳು ಯಾವ ರೀತಿ ವರದಿ ನೀಡುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.
comments
Log in to write reviews