ರಾಜ್ಯದ ನಕಲಿ ಬಿಪಿಎಲ್ ಕಾರ್ಡ್ ದಾರರಿಗೆ ಬಿಗ್ ಶಾಕ್!
2024-08-17 09:36:06
ರಾಜ್ಯದಲ್ಲಿ ಅಕ್ರಮ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ರಾಜ್ಯಸರ್ಕಾರ ಬಿಗ್ ಶಾಕ್ ನೀಡಿದೆ.
ಏಕೆಂದರೆ ಅನರ್ಹ ಬಿಪಿಎಲ್ ಕಾರ್ಡ್ ದಾರರನ್ನು ಗುರುತಿಸುವ ಕಾರ್ಯವನ್ನು ರಾಜ್ಯಸರ್ಕಾರ ಕೈಗೆತ್ತಿಕೊಂಡಿದೆ.
ಇವರಿಗೆಲ್ಲಾ ಬಿಪಿಎಲ್ ಕಾರ್ಡ್ ಬಂದ್!
ಹೌದು, ರಾಜ್ಯದಲ್ಲಿ ಸರ್ಕಾರಿ, ಅರೆಸರ್ಕಾರಿ, ತೆರಿಗೆ ಪಾವತಿಸುವರು, ಮನೆ ಬಾಡಿಗೆ ಕೊಡುತ್ತಿರುವರು, 7.5 ಎಕರೆ ಜಮೀನು ಮಾಲೀಕರು ಯಾವುದೇ ಕಾರಣಕ್ಕೂ ಬಿಪಿಎಲ್ ಕಾರ್ಡ್ ಹೊಂದಿರಬಾರದು. ಅಕಸ್ಮಾತ್ ಇಂತಹ ಮೇಲ್ಕಂಡ ಸವಲತ್ತುಗಳನ್ನು ಹೊಂದಿರುವ ಯಾರೇ ಆಗಲಿ ಮೊದಲು ತಮ್ಮ ಬಿಪಿಎಲ್ ಕಾರ್ಡ್ ವಾಪಸ್ ಕೊಡಲೇಬೇಕು, ಜೊತೆಗೆ ಈವರೆಗೆ ಸರ್ಕಾರ ಅನ್ನಭಾಗ್ಯ ಯೋಜನೆಯ ಅಡಿ ಬಿಪಿಎಲ್ ಕಾರ್ಡ್ ಗೆ ನೀಡಿದ್ದ ಉಚಿತ ಅಕ್ಕಿಯ ಮೊತ್ತವನ್ನು ಅಂದರೆ ಹಣವನ್ನು ಕಡ್ಡಾಯವಾಗಿ ಹಿಂತಿರುಗಿಸಲೇಬೇಕು ಮತ್ತು ಅದಕ್ಕೆ ಕ್ರಿಮಿನಲ್ ಮೊಕದ್ದಮೆಯನ್ನು ಸಹ ಎದುರಿಸಲೇಬೇಕು!
comments
Log in to write reviews