ರಾಜ್ಯಪಾಲರನ್ನು ಭೇಟಿಯಾದ ಟಿ.ಜೆ.ಅಬ್ರಹಾಂ ಹೇಳಿದ್ದಿಷ್ಟು...

ರಾಜ್ಯಪಾಲರನ್ನು ಭೇಟಿಯಾದ ಟಿ.ಜೆ.ಅಬ್ರಹಾಂ ಹೇಳಿದ್ದಿಷ್ಟು...

2024-08-17 06:45:43

ಮುಡಾ ಸೈಟ್ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​​ಗೆ ರಾಜ್ಯಪಾಲರ ಅನುಮತಿ ಸಿಕ್ಕ ಬೆನ್ನಲ್ಲೇ ದೂರುದಾರ, ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿದ್ದಾರೆ. 
ಬಳಿಕ ರಾಜಭವನದ ಬಳಿ ಮಾತನಾಡಿದ ಅವರು, ‘ಸೋಮವಾರ ಕೇವಿಯಟ್‌ ಹಾಕುತ್ತೇನೆ. ಸಣ್ಣ ಸ್ಪಷ್ಟನೆ, ಕ್ಲಾರಿಟಿ ಬೇಕಿತ್ತು, ಅದಕ್ಕೆ ನನ್ನ ನೋಡಬೇಕು ಎಂದು ಗವರ್ನರ್ ಕರೆದಿದ್ದರು. ಆದ್ದರಿಂದ ಗವರ್ನರ್  ಭೇಟಿಯಾಗಿ ಆ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ ಎಂದರು.

ಇನ್ನು ಪ್ರಾಸಿಕ್ಯೂಷನ್​​ಗೆ ಗವರ್ನರ್ ಅನುಮತಿ ನೀಡಿದ ಪ್ರತಿಯನ್ನು ಕೋರ್ಟ್​ಗೆ ಸಲ್ಲಿಸುತ್ತೇನೆ. ಆ ಬಳಿಕ ಕೋರ್ಟ್ ನಿರ್ದೇಶನದಂತೆ ಎಫ್​ಐಆರ್ ದಾಖಲಾಗಲಿದೆ. ಈಗಾಗಲೇ ಕೋರ್ಟ್​ನಲ್ಲಿ ಈ ವಿಚಾರ ಇದೆ. ಲೋಕಾಯುಕ್ತಕ್ಕೆ ಸ್ಯಾಂಕ್ಷನ್ ಕಾಪಿಯನ್ನ ಕಳಿಸಲಾಗುತ್ತದೆ. ಈ ಹಿಂದೆ ಎಸ್ ಎಂ ಕೃಷ್ಣ, ಧರ್ಮಸಿಂಗ್, ಹೆಚ್‌ಡಿಕೆ, ನಿರಾಣಿ, ಶಶಿಕಲಾ ಜೊಲ್ಲೆ ಮೇಲೂ ಸಹ ದೂರು ನೀಡಿದ್ದೆ. ಆ ಕೇಸ್‌ನಲ್ಲಿ ಅನುಮತಿ ನೀಡದ ವಿಚಾರವಾಗಿ ಮಾತನಾಡಿ, ‘ ಅದು ನನಗೆ ಸಂಬಂಧ ಪಡದ ವಿಚಾರ ಮತ್ತು ರಾಜಕೀಯ ಆರೋಪಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ಸಿಎಂ ಸ್ಥಾನಕ್ಕೆ ರಾಜೀನಾಮೆ ವಿಚಾರ

ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ನಾವು ಕೇಳಿಲ್ಲ, ಸಿಎಂ ವಿರುದ್ಧ ಪ್ರಾಸಿಕ್ಯೂಷನ್​​ಗೆ ಅನುಮತಿ ನೀಡಿ ಎಂದು ಕೇಳಿದ್ದೆವು. ಜೊತೆಗೆ ನಾನು ಕೇಸ್​ನಲ್ಲಿರುವ ಅಕ್ರಮವನ್ನ ಮನವರಿಕೆ ಮಾಡಿದ್ದೀನಿ. ನಮ್ಮ ಮನವಿಯಂತೆ ರಾಜ್ಯಪಾಲರು ಅನುಮತಿ ಕೊಟ್ಟಿದ್ದಾರೆ. ಸಿಎಂ ವಿರುದ್ಧ ಪ್ರಾಸಿಕ್ಯೂಷನ್​​ಗೆ ಅನುಮತಿ ನೀಡಿದ್ದಕ್ಕೆ ಧನ್ಯವಾದ ಸಲ್ಲಿಸಿದ್ದೇನೆ ಎಂದು ಟಿ.ಜೆ.ಅಬ್ರಹಾಂ ಹೇಳಿದರು.

author single

L Ramprasad

Managing Director

comments

No Reviews