ಮುಡಾ ಹಗರಣದ ಬೆನ್ನಲ್ಲೇ ಕಾಂಗ್ರೆಸ್ ನೊಳಗೆ ಮತ್ತೊಂದು ಅಸಮಾಧಾನ ಸ್ಫೋಟ!
2024-09-04 11:00:34
ಬೆಂಗಳೂರು, ಸೆ.4: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಆಗಲೇ ಒಂದೂವರೆ ವರ್ಷವಾಯಿತು. ಇಷ್ಟಾದರೂ ಅದ್ಯಾಕೋ ಜನರು ಎಷ್ಟರಮಟ್ಟಿಗೆ ಖುಷಿಯಾಗಿದ್ದಾರೋ ಗೊತ್ತಿಲ್ಲ. ಆದರೆ ಶಾಸಕರು, ಸಚಿವರು ಕಾರ್ಯಕರ್ತರಂತೂ ಸರ್ಕಾರದ ನಡೆ ಬಗ್ಗೆ ಬೇಸರಗೊಂಡಿದ್ದಾರೆ. ವಿವಿಧ ಅಕಾಡೆಮಿ ಸದಸ್ಯರ ನೇಮಕ, ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯರ ನೇಮಕದ ಬಗ್ಗೆ ಕಾಂಗ್ರೆಸ್ ನಲ್ಲಿ ಅಪಸ್ವರ ಎದ್ದಿದೆ. ನೇಮಕಾತಿ ಗೊಂದಲಗಳ ಬಗ್ಗೆ ರಾಹುಲ್ ಗಾಂಧಿವರೆಗೆ ದೂರು ನೀಡಲು ನಾಯಕರ ನಿರ್ಧಾರ ಮಾಡಿದ್ದಾರೆ. ನೇಮಕಾತಿಯಲ್ಲಿ ಸ್ವಜನ ಪಕ್ಷಪಾತದ ಆರೋಪ ಮಾಡುತ್ತಿರುವ ಕೈ ನಾಯಕರು, ಕೆಲವು ನಿರ್ಧಾರಗಳಲ್ಲಿ ಸಂಬಂಧಪಟ್ಟ ಸಚಿವರಿಗೇ ಮಾಹಿತಿ ನೀಡುತ್ತಿಲ್ಲ ಎಂದು ಬೇಸರದ ಜೊತೆಗೆ ಅಸಮಾಧಾನ ಹೊರಹಾಕುತ್ತಿದ್ದಾರೆ.
ನಿಗಮ-ಮಂಡಳಿ ಮಾಜಿ ನಿರ್ದೇಶಕರ ನೇಮಕಕ್ಕೆ ಗೃಹ ಸಚಿವ ಡಾ.ಪರಮೇಶ್ವರ ನೇತೃತ್ವದ ಸಮಿತಿ ಮಾಡಲಾಗಿದೆ. ಆದರೆ ಆ ಸಮಿತಿಯ ಗಮನಕ್ಕೂ ಬಾರದೆ ಸಿಎಂ ಕಚೇರಿಯಿಂದಲೇ ನೇರ ನೇಮಕ ಆರೋಪ ಕೇಳಿಬರುತ್ತಿದೆ. ಸಂಬಂಧಿಸಿದ ಇಲಾಖೆ ಸಚಿವರ ಗಮನಕ್ಕೂ ಬಾರದೆ ನೇಮಕಕ್ಕೆ ಖಂಡನೆ ವ್ಯಕ್ತವಾಗುತ್ತಿದೆ.
ಕಳೆದ ಬಾರಿ ಸರ್ಕಾರದಲ್ಲಿ ಪ್ರಮುಖ ಹುದ್ದೆ ಅಲಂಕರಿಸಿದವರೇ ಈ ಬಾರಿಯೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ ಎಂಬ ಆರೋಪವಿದೆ. ಆಯಾ ಕ್ಷೇತ್ರದಲ್ಲಿ ಏನೂ ಸಾಧನೆ ಮಾಡದವರಿಗೆ ಕುರ್ಚಿ ಭಾಗ್ಯ ನೀಡಲಾಗುತ್ತಿದೆ, ಪಕ್ಷದ 2ನೇ, 3ನೇ ಹಂತದ ನಾಯಕರು, ಕಾರ್ಯಕರ್ತರಿಗೆ ಅವಕಾಶ ಸಿಗುತ್ತಿಲ್ಲ. ಸಿಂಡಿಕೇಟ್ ಸದಸ್ಯ ಸ್ಥಾನ ಬಹುತೇಕ ಸಾಹಿತಿಗಳು, ಸಾಹಿತಿಗಳ ಸೋಗಿನಲ್ಲಿರುವವರಿಗೆ ಆದ್ಯತೆ ನೀಡಿರುವ ದೂರು ಕೇಳಿಬರುತ್ತಿದೆ.
ಸ್ವಪಕ್ಷಿಯರಿಗೆ ಆಯಕಟ್ಟಿನ ಹುದ್ದೆ ನೀಡುತ್ತಿರುವ ವರ್ಗಾವಣೆ ಮಾಡುತ್ತಿರುವ ಬಗ್ಗೆ ಈ ಹಿಂದೆಯೇ ಶಾಸಕ ಶಾಮನೂರು ಶಿವಶಂಕರಪ್ಪ ಬಹಿರಂಗ ಆಕ್ರೋಶ ವ್ಯಕ್ತಪಡಿಸಿದ್ದರು. ಬಹುತೇಕ ನಾಮನಿರ್ದೇಶನದಲ್ಲಿ ವೀರಶೈವ ಲಿಂಗಾಯತರು, ಕಡೆಗಣನೆ ಬಗ್ಗೆ ಜನಾಂಗದ ಮುಖಂಡರಲ್ಲಿ ಬೇಗುದಿ ವ್ಯಕ್ತವಾಗಿತ್ತು. ವೀರಶೈವ ಲಿಂಗಾಯತರು, ಒಕ್ಕಲಿಗರನ್ನು ಕಡೆಗಣಿಸಲಾಗುತ್ತಿದೆ ಎಂಬ ಆಕ್ಷೇಪವೂ ಇದೆ. ಶೈಕ್ಷಣಿಕ ವಲಯದ ಗಂಧ ಗಾಳಿ ಗೊತ್ತಿಲ್ಲದವರಿಗೂ ಮಣೆ ಹಾಕಿದೆ ಎಂಬ ಆರೋಪ ಕೇಳಿಬರುತ್ತಿದೆ. ಗೃಹ ಸಚಿವ ಡಾ. ಜಿ.ಪರಮೇಶ್ವರ ನೇತೃತ್ವದ ಸಮಿತಿ ಗಮನಕ್ಕೂ ಬಾರದ ನೇಮಕವಾಗಿರುವ ಬಗ್ಗೆ ಹಿರಿಯ ಸಚಿವರೇ ಬೇಸರ ವ್ಯಕ್ತಪಡಿಸಿದ್ದಾರೆ. ಡಾ.ಪರಮೇಶ್ವರ ಸಮಿತಿ ಏಕೆ ಬೇಕಿತ್ತು? ಎಂದು ಕಾಂಗ್ರೆಸ್ ನಲ್ಲಿ ಪ್ರಶ್ನೆ ಎದ್ದಿದೆ.
ಒಂದು ಕಡೆ ಸಿಎಂ ಸಿದ್ದರಾಮಯ್ಯ ಮುಡಾ ಕೇಸ್ ನಲ್ಲಿ ಕಾನೂನು ಸಮರದಲ್ಲಿ ಹೋರಾಟ ಮಾಡುತ್ತಿದ್ದಾರೆ. ಆದರೆ ಇತ್ತ ರಾಜ್ಯಸರ್ಕಾರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಕಾಂಗ್ರೆಸ್ ನಾಯಕರಿಗೆ ಸಮಾಧಾನ ತರುತ್ತಿಲ್ಲ.
ಈ ಅಸಮಾಧಾನ ಮುಂದೆ ಸಿಎಂ ಸಿದ್ದರಾಮಯ್ಯ ಅವರ ಕುರ್ಚಿಯನ್ನು ಸಲೀಸಾಗಿ ಕಿತ್ತುಕೊಳ್ಳುವ ಸಾಧ್ಯತೆ ಇದೆ ಎಂದು ಎಐಸಿಸಿ ಮೂಲಗಳು ತಿಳಿಸಿವೆ. ಇದರಿಂದಲೇ ಖುದ್ದು ಲೋಕಸಭೆಯ ಪ್ರತಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿಯವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬದಿಗೊತ್ತಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ರಾಜ್ಯದ ಗೃಹ ಸಚಿವ ಪರಮೇಶ್ವರ್ ಅವರ ಸಾಲಿನಲ್ಲಿ ಸಿಎಂ ಆಗುವ ನಾಯಕರು ಎಂದು ತೀರ್ಮಾನಿಸಿ, ದೆಹಲಿಯಲ್ಲಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ಕರ್ನಾಟಕದಲ್ಲಿ ಒಂದು ವೇಳೆ ಮುಡಾ ಕೇಸ್ ನಲ್ಲಿ ರಾಜ್ಯಪಾಲರ ಪ್ರಾಸಿಕ್ಯೂಶನ್ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದರೆ ಆಗ ಪರ್ಯಾಯ ಸಿಎಂ ಆಗಲು ನೀವು ರೆಡಿಯಾಗಿರಿ ಎಂದು ಈಗಲೇ ರಾಹುಲ್ ಗಾಂಧಿಯವರು ಸಚಿವ ಸತೀಶ್ ಜಾರಕಿಹೊಳಿ ಮತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಲ್ಲಿ ಒಬ್ಬರನ್ನು ಸಿಎಂ ಪಟ್ಟಕ್ಕೆ ಏರಿಸಲು ತೀರ್ಮಾನಿಸಿದ್ದಾರೆ ಎಂದು ದೆಹಲಿಯ ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ.
ಒಂದೆಡೆ ಮುಡಾ ಸೈಟ್ ಹಗರಣದಲ್ಲಿ ಸಿಲುಕಿ ರಾಜ್ಯಪಾಲರ ಪ್ರಾಸಿಕ್ಯೂಶನ್ ವಿರುದ್ಧದ ಅರ್ಜಿ ಹೈಕೋರ್ಟ್ ನಲ್ಲಿ ವಜಾಗೊಂಡರೆ, ಆಗ ಅಸಮಾಧಾನಿತ ಶಾಸಕರು, ಸಚಿವರು ಒಂದೆಡೆ ಸೇರಿ ಸಿದ್ದರಾಮಯ್ಯ ಅವರು ಸೂಚಿಸುವ ನಾಯಕನಿಗೆ ಯಾವುದೇ ಕಾರಣಕ್ಕೂ ಸಿಎಂ ಪಟ್ಟ ಕಟ್ಟಬೇಡಿ...ಏಕೆಂದರೆ ಹಾಲಿ ಸಿಎಂ ಸಿದ್ದರಾಮಯ್ಯ ಅವರು ನಿಷ್ಠಾವಂತ ಪಕ್ಷದ ಶಾಸಕರನ್ನು ಕಡೆಗಣಿಸಿ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಾರ. ಜೊತೆಗೆ ಹಲವಾರು ಸಚಿವರ ಖಾತೆಗಳಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುತ್ತಾರೆ ಎಂದು ಸಿದ್ದರಾಮಯ್ಯ ಅವರು ಸೂಚಿಸುವ ನಾಯಕನಿಗೆ ಮುಂದೆ ಯಾವುದೇ ಕಾರಣಕ್ಕೂ ಸಿಎಂ ಪದವಿ ಕೊಡಬಾರದೆಂದು ಹೈಕಮಾಂಡ್ ಗೆ ಒತ್ತಾಯಿಸಲು ಮುಂದಾಗಿದ್ದಾರೆ.
comments
Log in to write reviews