ಚಾರ್ಜ್ ಶೀಟ್ ಪ್ರಕಾರ ರೇಣುಕಾಸ್ವಾಮಿ ಕೊಲೆ ನಡೆದಿದ್ದು ಹೀಗೆ...

ಚಾರ್ಜ್ ಶೀಟ್ ಪ್ರಕಾರ ರೇಣುಕಾಸ್ವಾಮಿ ಕೊಲೆ ನಡೆದಿದ್ದು ಹೀಗೆ...

2024-09-04 05:33:45

ಬೆಂಗಳೂರು, ಸೆ.4: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇಂದು ಕೋರ್ಟ್ ಗೆ 3,991 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. 
 
ಈ ಚಾರ್ಜ್ ಶೀಟ್ ನಲ್ಲಿ ಬರೋಬ್ಬರಿ 231 ಜನರನ್ನು ಸಾಕ್ಷಿಗಳನ್ನಾಗಿ ಉಲ್ಲೇಖಿಸಲಾಗಿದೆ. ಅದರಲ್ಲೂ 3 ಜನರನ್ನು ಪ್ರತ್ಯಕ್ಷ ಸಾಕ್ಷಿಗಳು ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ. 

ರೇಣುಕಾಸ್ವಾಮಿಯನ್ನು ಮೊದಲು ದರ್ಶನ್ ಕರೆದಿದ್ದಾರೆ ಎಂದು ಪುಸಲಾಯಿಸಿ ಚಿತ್ರದುರ್ಗದಿಂದ ಕರೆತಂದು ಜೂನ್ 8 ರ ಮಧ್ಯಾಹ್ನ ಬೆಂಗಳೂರಿನ ಪಟ್ಟಣಗೆರೆ ಶೆಡ್ ಗೆ ಕರೆತರಲಾಯಿತು. ಆಗ ರೇಣುಕಾಸ್ವಾಮಿ ಕೊಲೆ ಮಾಡುವ ಮೊದಲು ಅಲ್ಲಿಗೆ ಪವಿತ್ರಾಗೌಡ ಸ್ಥಳಕ್ಕೆ ಬಂದು ಇವನೇ ನನಗೆ ಫೋನ್ ಮೂಲಕ ನಿತ್ಯ ಅಶ್ಲೀಲ ಮೆಸೇಜ್ ಕಳಿಸಿದ್ದು ಎಂದು ದರ್ಶನ್ ಅವರಿಗೆ ಹೇಳಿ ರೇಣುಕಾಸ್ವಾಮಿಗೆ ಸಿಟ್ಟಿನಿಂದ ಚಪ್ಪಲಿಯಿಂದ ಹೊಡೆದಿದ್ದಾರೆ. ಆಗ ಮಾರಕಾಸ್ತ್ರದಿಂದ ಪವಿತ್ರಾಗೌಡ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾರೆ. ಜೊತೆಗೆ ದರ್ಶನ್ ಕೂಡ ರೇಣುಕಾಸ್ವಾಮಿಗೆ ದಿನಾಲೂ ಅನ್ ನೌನ್ ನಂಬರ್ ನಿಂದ ಇವಳಿಗೆ ಕಾಟ ಕೊಟ್ಟು ತಲೆಮರೆಸಿಕೊಂಡಿದ್ದೆ, ಇವತ್ತು ನಿನ್ನ ನಮ್ಮ ಹುಡುಗರು ಚಿತ್ರದುರ್ಗದಿಂದ ಕರೆದುಕೊಂಡು ಬಂದಿದ್ದಾರೆ ಎಂದು ಹೇಳಿ ರೇಣುಕಾಸ್ವಾಮಿಗೆ ಧರ್ಮದೇಟು ಕೊಟ್ಟಿದ್ದಾರೆ. ನಂತರ ಅಲ್ಲಿಂದ ದರ್ಶನ್ ಮತ್ತು ಪವಿತ್ರಾಗೌಡ ತೆರಳಿದ್ದಾರೆ‌. ಆದರೆ ಅಲ್ಲಿಯೇ ಇದ್ದ ದರ್ಶನ್ ಅವರ ಹುಡುಗರು ರೇಣುಕಾಸ್ವಾಮಿಗೆ ಸಿಟ್ಟಿನಿಂದ ಕರೆಂಟ್ ಶಾಕ್ ಕೊಡುತ್ತಾ ಸಂಜೆಯವರೆಗೂ ಹೊಡೆದು ನಾನಾ ರೀತಿಯ ಹಿಂಸೆ ಕೊಟ್ಟು ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ್ದಾರೆ. ಆದರೆ ಇತ್ತ ರಾತ್ರಿ ಮನೆಗೆ ಬಂದಿದ್ದ ದರ್ಶನ್ ಗೆ ಫೋನ್ ಮಾಡಿದ ಅವರ ಹುಡುಗರು ' ಅಣ್ಣಾ ನಾವು ರೇಣುಕಾಸ್ವಾಮಿನಾ ಕೊಂದೇ ಬಿಟ್ಟೆವು‌. ಶವ ಏನು ಮಾಡೋಣ? ಎಂದು ಕೇಳಿದ್ದಾರೆ. ಆಗ ದರ್ಶನ್ ತಮಗೆ ಗೊತ್ತಿದ್ದ ಆಪ್ತರಾದ ಪಿಎಸ್ಐ ಒಬ್ಬರಿಗೆ ಫೋನ್ ಮಾಡಿ ನಮ್ಮ ಹುಡುಗರು ಪವಿತ್ರಾಗೌಡಗೆ ಅನ್ ನೌನ್ ಮೊಬೈಲ್ ನಂಬರ್ ಮೂಲಕ ಅಶ್ಲೀಲ ಮೆಸೇಜ್ ಕಳುಹಿಸ್ತಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಎಂಬುವನನ್ನು ಬೆಂಗಳೂರಿಗೆ ಕರೆತಂದು ಚೆನ್ನಾಗಿ ತದಕಿದೆವು. ಪವಿತ್ರಾಗೌಡ ಅವರು ಅವನಿಗೆ ಚಪ್ಪಲಿಯಲ್ಲಿ ಹೊಡೆದಳು. ನಾನು ಅವನಿಗೆ ಬೆಂಡೆತ್ತಿದೆ. ಆದರೆ ಪವಿತ್ರಾಗೌಡ ಮತ್ತು ನಾನು ಹಲ್ಲೆ ಮಾಡಿದ ಪಟ್ಟಣಗೆರೆ ಶೆಡ್ ನಿಂದ ವಾಪಸ್ ಬಂದೆವು‌. ಆದರೆ ನಮ್ಮ ಹುಡುಗರು ಎಣ್ಣೆ ಏಟಲ್ಲಿ ರೇಣುಕಾಸ್ವಾಮಿಗೆ ಕರೆಂಟ್ ಶಾಕ್ ಕೊಲೆಯನ್ನೇ ಮಾಡಿಬಿಟ್ಟಿದ್ದಾರೆ. ಈಗ ಶವ ಎಲ್ಲಿಗೆ ಹಾಕಿಸಲು ಹೇಳಲಿ? ಎಂದು ಆ ಪಿಎಸ್ಐ ಅವರಿಗೆ ದರ್ಶನ್ ಕೇಳಿದ್ದಾರೆ. ಆಗ ಪಿಎಸ್ಐ ಅವರು ಉತ್ತರಿಸಿ, ಅಲ್ಲೇ ಇರುವ ಯಾವುದಾದರೂ ಒಂದು ರಾಜಕಾಲುವೆಗೆ ಶವ ಹಾಕಿದರೆ ಈ ಕ್ರೈಂ ಮುಚ್ಚಿಹೋಗುತ್ತೆ ಎಂದು ಸಲಹೆ ನೀಡಿದ್ದಾರೆ. ಅದರಂತೆ ದರ್ಶನ್ ಅವರು ತಮ್ಮ ಹುಡುಗರಿಗೆ ಸುಮನಹಳ್ಳಿ ರಾಜಕಾಲುವೆಗೆ ರೇಣುಕಾಸ್ವಾಮಿ ಶವ ಹಾಕಲು ಹೇಳಿದ್ದಾರೆ.
ಹೀಗೆ ಕಳೆದ ಜೂನ್ 8 ರ ಸಂಜೆ ಕೊಲೆಗೀಡಾಗಿದ್ದ ಚಿತ್ರದುರ್ಗದ ರೇಣುಕಾಸ್ವಾಮಿಯ ಶವವನ್ನು ಅದೇ ದಿನ ಮಧ್ಯರಾತ್ರಿ ಯಾರಿಗೂ ತಿಳಿಯದಂತೆ ಸುಮನಹಳ್ಳಿಯ ರಾಜಕಾಲುವೆಗೆ ಹಾಕಿ ಬಂದಿದ್ದಾರೆ.
ಸುಮನಹಳ್ಳಿ ರಾಜಕಾಲುವೆಯಲ್ಲಿ ಸಿಕ್ಕ ಶವ ಚಿತ್ರದುರ್ಗದ ರೇಣುಕಾಸ್ವಾಮಿ ಎಂಬ ವ್ಯಕ್ತಿಯದ್ದು ಎಂದು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿಕೊಂಡರು. 
ಇದೀಗ SPP ಮೂಲಕ ಸಲ್ಲಿಕೆಯಾಗಿರುವ 3,991 ಪುಟಗಳ ಚಾರ್ಜ್ ಶೀಟ್ ನಲ್ಲಿ ಮೂವರು ಪ್ರತ್ಯಕ್ಷ ಸಾಕ್ಷಿಗಳನ್ನು ಪೊಲೀಸರು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದಾರೆ.
ಕೊಲೆ ನಡೆದ ಪಟ್ಟಣಗೆರೆ ಶೆಡ್ ನ ಸೆಕ್ಯುರಿಟಿ ಗಾರ್ಡ್ ಮೊದಲ ಪ್ರತ್ಯಕ್ಷ ಸಾಕ್ಷಿ ಎಂದು ಹಾಗೂ ಅಲ್ಲಿಯೇ ಜೂನ್ 8 ರಂದು ಪಟ್ಟಣಗೆರೆ ಶೆಡ್ ನಲ್ಲಿ ಕೆಲಸ ಮಾಡುತ್ತಿದ್ದ ಮತ್ತಿಬ್ಬರು ಸಿಬ್ಬಂದಿಗಳು ಪ್ರತ್ಯಕ್ಷ ಸಾಕ್ಷಿಗಳು ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.
ಚಾರ್ಜ್ ಶೀಟ್ ನಲ್ಲಿ ಒಟ್ಟಾರೆ 231 ಜನರು ರೇಣುಕಾಸ್ವಾಮಿ ಕೊಲೆಗೆ ಸಾಕ್ಷಿಗಳು ಎಂದು ಉಲ್ಲೇಖಿಸಲಾಗಿದೆ.

author single

L Ramprasad

Managing Director

comments

No Reviews