ರಾಜ್ಯದ ಕರಾವಳಿಯಲ್ಲಿ ಭಾರಿ ಮಳೆಯ ರೆಡ್ ಅಲರ್ಟ್ ಜಾರಿ
2024-09-24 10:42:51
ಬೆಂಗಳೂರು, ಸೆ.24: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಭಾರಿ ಮಳೆಯಾಗುವ ಮುನ್ಸೂಚನೆ ದೊರೆತಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ.
ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಬೆಳಗಾವಿ, ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ತುಮಕೂರು, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ವಿಜಯಪುರ, ಕೊಪ್ಪಳ, ಹಾವೇರಿ, ಗದಗ, ಧಾರವಾಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ವಿಜಯನಗರ ಜಿಲ್ಲೆಗಳಲ್ಲಿ ಕೂಡ ಮಳೆಯಾಗಲಿದೆ.
ಇಲ್ಲೆಲ್ಲಾ ನಿನ್ನೆ ಮಳೆ...
ಕಾರವಾರ, ಹಳಿಯಾಳ, ಮಧುಗಿರಿ, ಶಿರಾಲಿ, ಸೇಡಬಾಳ, ಕೋಟ, ಉಡುಪಿ, ನಿಪ್ಪಾಣಿ, ಸೈದಾಪುರ, ಸಂಕೇಶ್ವರ, ಧಾರವಾಡ, ರಾಯಭಾಗ, ಚಿಕ್ಕೋಡಿ, ಕೊಪ್ಪ, ಕುಂದಾಪುರ, ಮಂಕಿ, ಗೋಕರ್ಣ, ಝಲ್ಕಿ, ಔರಾದ್, ಕುಕನೂರು, ನರಗುಂದ, ಇಳಕಲ್ನಲ್ಲಿ ಮಳೆಯಾಗಿದೆ.
ರಬಕವಿ, ಹಿಡಕಲ್, ಹುಕ್ಕೇರಿ, ಹೊನ್ನಾವರ, ಅಂಕೋಲಾ, ಕಲಘಟಗಿ, ಬೆಳಗಾವಿ, ಶಿರಹಟ್ಟಿ, ನೆಲೋಗಿ, ಮಹಾಲಿಂಗಪುರ, ಮುಂಡಗೋಡು, ಮಂಗಳೂರು, ಜೇವರ್ಗಿ, ಮೂಲ್ಕಿ, ಸಿಂದಗಿ, ಆಲಮಟ್ಟಿ, ಗದಗ, ಗಬ್ಬೂರು, ಹುಂಚದಕಟ್ಟೆ, ಕಳಸ, ಕೆಆರ್ನಗರ, ಕೊಟ್ಟಿಗೆಹಾರದಲ್ಲಿ ಮಳೆಯಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಮಳೆಯಾಗುವ ಸಾಧ್ಯತೆ ಇದೆ.
comments
Log in to write reviews