ಪ್ಯಾರಿಸ್ ಒಲಿಂಪಿಕ್ಸ್‌: ಹಾಕಿಯಲ್ಲಿ ಭಾರತಕ್ಕೆ ಭರ್ಜರಿ ಗೆಲುವು

ಪ್ಯಾರಿಸ್ ಒಲಿಂಪಿಕ್ಸ್‌: ಹಾಕಿಯಲ್ಲಿ ಭಾರತಕ್ಕೆ ಭರ್ಜರಿ ಗೆಲುವು

2024-08-02 09:33:01

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಹಾಕಿ ಪುರುಷರ ವಿಭಾಗದ 'ಬಿ' ಗುಂಪಿನ ಪಂದ್ಯದಲ್ಲಿ 2020 ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ 3-2 ಗೋಲುಗಳಿಂದ ಗೆದ್ದು ಸಂಭ್ರಮಿಸಿದೆ.
ಈ ಮೂಲಕ 52 ವರ್ಷಗಳ ನಂತರ ಒಲಂಪಿಕ್ಸ್ ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ಹಾಕಿ ತಂಡದ ವಿರುದ್ಧ ಭಾರತ ತಂಡ ಗೆದ್ದ ದಾಖಲೆ ನಿರ್ಮಿಸಿತು.
ಭಾರತ ಪರ ಅಭಿಷೇಕ್ ಮೊದಲ ಗೋಲು ಬಾರಿಸಿದರು. ಉಳಿದೆರಡು ನಿರ್ಣಾಯಕ ಗೋಲುಗಳನ್ನು ಹರ್ಮನ್ ಪ್ರೀತ್ ಸಿಂಗ್ ಬಾರಿಸಿ ಭಾರತಕ್ಕೆ ಜಯ ತಂದಿತ್ತರು.
ಆಸ್ಟ್ರೇಲಿಯಾ ಪರ ಥಾಮಸ್ ಗ್ರೇಕ್ ಮತ್ತು ಬ್ಲೇಕ್‌ ಕವರ್ಸ್ ತಲಾ ಒಂದು ಗೋಲು ಗಳಿಸಿದರು.
ಬಿ ಗುಂಪಿನಲ್ಲಿ ಭಾರತ 4 ಪಂದ್ಯಗಳನ್ನು ಆಡಿ 7 ಅಂಕ ಗಳಿಸಿ 2ನೇ ಸ್ಥಾನ ಗಳಿಸಿದೆ.
ಹಾಲಿ ಚಾಂಪಿಯನ್ ಬೆಲ್ಜಿಯಂ ಬಿ ಗುಂಪಿನಲ್ಲಿ ಭಾರತ ವಿರುದ್ಧ ಗೆದ್ದು ಮೊದಲ ಸ್ಥಾನದಲ್ಲಿದೆ.

author single

L Ramprasad

Managing Director

comments

No Reviews