60 ವರ್ಷದ ಮಹಿಳೆಗೆ ಪ್ರಜ್ವಲ್ ನಿಂದ ಲೈಂಗಿಕ ದೌರ್ಜನ್ಯ: ಚಾರ್ಜ್ ಶೀಟ್ ನಲ್ಲಿ ಉಲ್ಲೇಖ!

60 ವರ್ಷದ ಮಹಿಳೆಗೆ ಪ್ರಜ್ವಲ್ ನಿಂದ ಲೈಂಗಿಕ ದೌರ್ಜನ್ಯ: ಚಾರ್ಜ್ ಶೀಟ್ ನಲ್ಲಿ ಉಲ್ಲೇಖ!

2024-09-11 03:09:54

ಬೆಂಗಳೂರು, ಸೆ.11: ಲೈಂಗಿಕ ದೌರ್ಜನ್ಯ, ಅತ್ಯಾಚಾರ ನಡೆಸಿದ ಆರೋಪ ಪ್ರಕರಣಗಳಲ್ಲಿ ಬಂಧಿತನಾಗಿರುವ ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್​ ರೇವಣ್ಣ ಅವರು 60 ವರ್ಷ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ‌ಎಸ್ಐಟಿ ಅಧಿಕಾರಿಗಳು 2ನೇ ಚಾರ್ಜ್ ಶೀಟ್​ನಲ್ಲಿ ಉಲ್ಲೇಖಿಸಿದ್ದಾರೆ.​​

ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪದಡಿ ಪ್ರಜ್ವಲ್​ ರೇವಣ್ಣ ಅವರ ವಿರುದ್ಧ ಹೊಳೆನರಸೀಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಎಸ್​ಐಟಿ 113 ಸಾಕ್ಷಿಗಳನ್ನು ಒಳಗೊಂಡ 1632 ಪುಟಗಳ ಚಾರ್ಜ್​ಶೀಟ್ ಅನ್ನು ಸೋಮವಾರ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ​ಸಲ್ಲಿಸಿದೆ.

ಹೊಳೆನರಸೀಪುರದಲ್ಲಿ 60 ವರ್ಷದ ಮನೆಕೆಲಸದಾಕೆಯ ಮೇಲೆ ಪ್ರಜ್ವಲ್​ ರೇವಣ್ಣ ಅತ್ಯಾಚಾರ ಎಸಗಿದ್ದಾರೆ ಎಂದು ಚಾರ್ಜ್​ಶೀಟ್​ನಲ್ಲಿ ಎಸ್​ಐಟಿ ಅಧಿಕಾರಿಗಳು ಉಲ್ಲೇಖ ಮಾಡಿದ್ದಾರೆ. ಸಂತ್ರಸ್ತೆಯನ್ನ ಹೆದರಿಸಿ ಹಲವು ಬಾರಿ ದೌರ್ಜನ್ಯ ಎಸಗಿರುವುದು ತನಿಖೆಯಲ್ಲಿ ಧೃಡವಾಗಿದೆ.

ಕೃತ್ಯ ಎಸಗುವಾಗ ಮೊಬೈಲ್ ಮೂಲಕ ಪ್ರಜ್ವಲ್ ರೇವಣ್ಣ ಮೊಬೈಲ್​ನಲ್ಲಿ ವಿಡಿಯೋ ಚಿತ್ರಿಕರಿಸಿದ್ದರು. ಸಂತ್ರಸ್ತೆ ಕೈಮುಗಿದು ನಿಮ್ಮ ತಾತ ಹಾಗೂ ತಂದೆಗೆ ಊಟ ಬಡಿಸಿದ್ದೇನೆ, ನನ್ನ ಬಿಟ್ಟು ಬಿಡು ಎಂದು ಸಂತ್ರಸ್ತೆ‌ ಅಂಗಲಾಚಿದರೂ ಬಿಡದ ಪ್ರಜ್ವಲ್​ ರೇವಣ್ಣ ದೌರ್ಜನ್ಯ ಎಸಗಿದ್ದಾರೆ ಎಂದು ಎಸ್​ಐಟಿ ಉಲ್ಲೇಖಿಸಿದೆ.

ಚಾರ್ಜ್​​ಶೀಟ್​​ನಲ್ಲಿ ಸಿಆರ್​ಪಿಸಿ 164 ಅಡಿ ಸಂತ್ರಸ್ತೆ ಹಾಗೂ ಪ್ರಮುಖ ಸಾಕ್ಷಿಗಳ ಹೇಳಿಕೆ ದಾಖಲು ಮಾಡಲಾಗಿದೆ. 113 ಮಂದಿ ಸಾಕ್ಷಿದಾರರ ಹೇಳಿಕೆ, ಡಿಜಿಟಲ್ ಸಾಕ್ಷಿದಾರರ, ಎಫ್ಎಸ್ಎಲ್ ವರದಿ ಸಲ್ಲಿಕೆ ಮಾಡಲಾಗಿದೆ. ಪ್ರಜ್ವಲ್​ ರೇವಣ್ಣ ಒಟ್ಟು ನಾಲ್ವರು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿರುವ ಆರೋಪ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಎಸ್ಐಟಿ 4 ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.

ಡಿಎನ್​ಎ ಪರೀಕ್ಷೆ ಮುಂದಾದ ಎಸ್ಐಟಿ...
ತನಿಖೆ ವೇಳೆ ಎಸ್​ಐಟಿ ಅಧಿಕಾರಿಗಳು ಸಂತ್ರಸ್ತೆಯರ ಬಟ್ಟೆಗಳನ್ನ ವಶಕ್ಕೆ ಪಡೆದಿದ್ದರು. ಜೊತೆಗೆ ಎಸ್​ಐಟಿ ಅಧಿಕಾರಿಗಳು ಬಸವನಗುಡಿ ಹಾಗೂ ಹೊಳೆನರಸೀಪುರ ಮನೆಗಳಲ್ಲಿ, ತೋಟದ ಮ‌ನೆಯಲ್ಲಿ ಪ್ರಜ್ವಲ್ ರೇವಣ್ಣ ಬಳಸಿದ್ದ ಬೆಡ್ ಶೀಟ್​ಗಳನ್ನ ವಶಕ್ಕೆ ಪಡೆದಿದ್ದರು. ಇದೀಗ ಈ ಎಲ್ಲ ವಸ್ತುಗಳಲ್ಲಿ ಸಿಕ್ಕ ವೀರ್ಯ ಹಾಗೂ ಕೂದಲಿನ ಮಾದರಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಇದರ ವರದಿಗಾಗಿ ಎಸ್ಐಟಿ ತಂಡ ಕಾಯುತ್ತಿದೆ. ಎಸ್ಐಟಿ ಈ ಹಿಂದೆ ಪ್ರಜ್ವಲ್ ರೇವಣ್ಣ ಅವರನ್ನು ಡಿಎನ್ಎ ಪರೀಕ್ಷೆಗೆ ಒಳಪಡಿಸಿತ್ತು. ವರದಿ ಬಂದ ಕೂಡಲೇ ಪ್ರಜ್ವಲ್ ಡಿಎನ್​ಎಗೆ ಹೋಲಿಕೆ ಮಾಡಲಾಗುತ್ತೆ. ಎರಡೂ ಹೋಲಿಕೆಯಾದರೆ ಪ್ರಜ್ವಲ್ ರೇವಣ್ಣ ಅವರಿಗೆ ದೊಡ್ಡ ಸಂಕಷ್ಟ ಎದುರಾಗಲಿದೆ.

author single

L Ramprasad

Managing Director

comments

No Reviews