ಆರ್‌ಎಸ್‌ಎಸ್ ಇಲ್ಲದ ಕಾರಣಕ್ಕೆ ಇಂಡೋನೇಷ್ಯಾದಲ್ಲಿ ಗಲಭೆಗಳಿಲ್ಲ ; ನಟ ಪ್ರಕಾಶ್ ರಾಜ್ !?

ಆರ್‌ಎಸ್‌ಎಸ್ ಇಲ್ಲದ ಕಾರಣಕ್ಕೆ ಇಂಡೋನೇಷ್ಯಾದಲ್ಲಿ ಗಲಭೆಗಳಿಲ್ಲ ; ನಟ ಪ್ರಕಾಶ್ ರಾಜ್ !?

2024-08-27 10:52:56

ಬೆಂಗಳೂರು, ಆಗಸ್ಟ್‌ 27: ಆರ್‌ಎಸ್‌ಎಸ್ ಇಲ್ಲದ ಕಾರಣ ಇಂಡೋನೇಷ್ಯಾದಲ್ಲಿ ಗಲಭೆಗಳಿಲ್ಲ ಎಂದು ನಟ ಪ್ರಕಾಶ್ ರಾಜ್ ಅವರು ಹೇಳಿದ್ದಾರೆಂಬ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಈ ಹೇಳಿಕೆಯನ್ನು ಪ್ರಕಾಶ್ ರಾಜ್ ಅವರು ನಿರಾಕರಿಸಿದ್ದಾರೆ. 

 

ಸಾಮಾಜಿಕ ಜಾಲತಾಣದಲ್ಲಿ @MeghUpdates ಎಂಬ ಖಾತೆಯಲ್ಲಿ ಪ್ರಕಾಶ್ ರಾಜ್ ಹೇಳಿಕೆಯೆಂದು ಪೋಸ್ಟ್ ಹಾಕಲಾಗಿದೆ. ಆರೆಸ್ಸೆಸ್ ಇದ್ದ ಕಡೆ ಗಲಭೆಗಳು ಆಗುತ್ತವೆ ಎಂದ ಪ್ರಕಾಶ್ ರಾಜ್ ಪರೋಕ್ಷವಾಗಿ ಹೇಳಿದ್ದನ್ನು ಉಲ್ಲೇಖ ಮಾಡಲಾಗಿದೆ. ಇಂಡೋನೇಷ್ಯಾವನ್ನು ಉದಾಹರಣೆಯಾಗಿ ನೀಡಿರುವ ಪ್ರಕಾಶ್ ರಾಜ್, ಶೇ.90 ಮುಸ್ಲಿಮರು, ಶೇ.2ರಷ್ಟು ಹಿಂದೂಗಳು ಹಾಗೂ 11 ಸಾವಿರ ಮಂದಿರಗಳು ಇಂಡೋನೇಷ್ಯಾದಲ್ಲಿ ಇವೆ. ಆದರೆ ಅಲ್ಲಿ ಆರ್​​​​ಎಸ್​​ಎಸ್​​ ಇಲ್ಲ. ಹಾಗಾಗಿ ಗಲಭೆಗಳು ನಡೆಯಲ್ಲ ಎಂದು ಹೇಳಿದ್ದಾರೆಂದು ಪೋಸ್ಟ್ ಹಾಕಲಾಗಿದೆ.

ಈ ಪೋಸ್ಟ್ ಸಾಕಷ್ಟು ವೈರಲ್ ಆಗಿದ್ದು, ಕೆಲವರು ಪ್ರಕಾಶ್ ರಾಜ್ ಅವರಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ, ಹಲವರು ವಿರೋಧ ವ್ಯಕ್ತಪಡಿಸಿ, ಟೀಕಿಸುತ್ತಿದ್ದಾರೆ. ಈ ನಡುವೆ ಜಾಲತಾಣದಲ್ಲಿಯೇ ಪ್ರಕಾಶ್ ರಾಜ್ ಪ್ರತಿಕ್ರಿಯೆ ನೀಡಿದ್ದು, ಈ ರೀತಿಯ ಹೇಳಿಕೆಯನ್ನು ನಾನು ನೀಡಿಯೇ ಇಲ್ಲ, ಇಂತಹ ಪೋಸ್ಟ್ ಗಳನ್ನು ಸೃಷ್ಟಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ. ನನ್ನ ವಕೀಲರೊದಿಗೆ ಮಾತುಕತೆ ನಡೆಸಲಾಗಿದೆ, ಈ ಬಗ್ಗೆ ಮಂಗಳವಾರ ಕಾನೂನು ಸಮರ ಶುರುವಾಗಲಿದೆ. ಈಗಾಗಲೇ ಟ್ವಿಟರ್ ಗೂ ದೂರು ನೀಡಲಾಗಿದೆ ಎಂದು ಹೇಳಿದ್ದಾರೆ. ಬಲಪಂಥೀಯರು ನನ್ನನ್ನು ಬಿಜೆಪಿ, ಮೋದಿ ಮತ್ತು ಅಮಿತ್ ಶಾ ಅವರ ವಿರುದ್ಧ ಇರುವ ಕಾರಣಕ್ಕಾಗಿಯೇ ಹಿಂದೂಗಳ ವಿರೋಧಿ ಎಂದು ಬಿಂಬಿಸುತ್ತಿದ್ದಾರೆ. ಇಂಥ ಹೇಳಿಕೆ ನೀಡಬೇಕಿದ್ದರೆ @MeghUpdates ನೀವೇ ನೀಡಿ, ನನ್ನ ಹೆಸರು ಬಳಸಿ ಹೇಳಿಕೆ ನೀಡಬೇಡಿ. ನಾನು ಮೂರು ದಿನಗಳಿಂದ ರಂಗಭೂಮಿಯ ಕಾರ್ಯಕ್ರಮದಲ್ಲಿ ನಿರತನಾಗಿದ್ದೆ. ಇದ್ದಕ್ಕಿದ್ದಂತೆ ಪೋಸ್ಟ್ ನೋಡಿದೆ. ಸಾಕಷ್ಟು ಜನರು ಟೀಕೆ ಮಾಡುತ್ತಿದ್ದು, ಕೋಪಗೊಂಡಿದ್ದಾರೆಂದು ತಿಳಿಸಿದ್ದಾರೆ.
 

author single

L Ramprasad

Managing Director

comments

No Reviews